India vs USA, T20 World Cup 2024: ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದ ಯುವ ಆಲ್’ರೌಂಡರ್ ಶಿವಂ ದುಬೆ ಮೇಲೆ ಎಲ್ಲರ ಕಣ್ಣು ಕೂಡ ನೆಟ್ಟಿದೆ. ಅವರಿಗೆ ಈ ಪಂದ್ಯದಲ್ಲಿ ರನ್ ಗಳಿಸುವ ಸುವರ್ಣಾವಕಾಶ ಲಭಿಸಲಿದೆ.
India vs USA, T20 World Cup 2024: ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದ ಯುವ ಆಲ್’ರೌಂಡರ್ ಶಿವಂ ದುಬೆ ಮೇಲೆ ಎಲ್ಲರ ಕಣ್ಣು ಕೂಡ ನೆಟ್ಟಿದೆ. ಅವರಿಗೆ ಈ ಪಂದ್ಯದಲ್ಲಿ ರನ್ ಗಳಿಸುವ ಸುವರ್ಣಾವಕಾಶ ಲಭಿಸಲಿದೆ.
T20 ವಿಶ್ವಕಪ್’ನ ತನ್ನ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಅಮೆರಿಕವನ್ನು ಎದುರಿಸಲಿದೆ. ಇದುವರೆಗೆ ಆಡಿರುವ ಎರಡೂ ಪಂದ್ಯಗಳನ್ನು ಭಾರತ ಗೆದ್ದಿದ್ದು, ಇಂದು ಮತ್ತೆ ನ್ಯೂಯಾರ್ಕ್’ನ ಅದೇ ಮೈದಾನದಲ್ಲಿ ಈ ಪಂದ್ಯ ಆಡಲಿದೆ. ಈ ಉಭಯ ತಂಡಗಳು ಟೂರ್ನಿಯಲ್ಲಿ ಇದುವರೆಗೂ ಸೋತಿಲ್ಲ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೂಪರ್-8ಗೆ ಲಗ್ಗೆ ಇಡಲಿದೆ.ಐಪಿಎಲ್ 2024ರಲ್ಲಿ ಅತ್ಯುತ್ತಮ ಪ್ರದರ್ಶನದಿಂದಾಗಿ, ಶಿವಂ ದುಬೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದರು. ಆದರೆ ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಸಾಧನೆ ಏನೂ ಮಾಡಲು ಸಾಧ್ಯವಾಗಲಿಲ್ಲ.
2024ರ ಐಪಿಎಲ್ ಶಿವಂ ದುಬೆಗೆ ಇದುವರೆಗಿನ ಅತ್ಯುತ್ತಮ ಋತುವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಈ ಯುವ ಆಲ್ ರೌಂಡರ್ 14 ಪಂದ್ಯಗಳಲ್ಲಿ 396 ರನ್ ಗಳಿಸಿದ್ದು, 160 ಕ್ಕಿಂತ ಹೆಚ್ಚು ಸ್ಫೋಟಕ ಸ್ಟ್ರೈಕ್ ರೇಟ್’ನೊಂದಿಗೆ ಬ್ಯಾಟ್ ಮಾಡಿದ್ದರು. ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ CSKಯನ್ನು ಗೆಲುವಿನತ್ತ ಮುನ್ನಡೆಸಿದ್ದರು.ಟಿ20 ಮಾದರಿಯಲ್ಲಿ 138 ಪಂದ್ಯಗಳನ್ನು ಆಡಿರುವ ಶಿವಂ ದುಬೆ ಮೊದಲ ಎಸೆತದಲ್ಲೇ ಬೌಂಡರಿ ಹಾಗೂ ಸಿಕ್ಸರ್ ಬಾರಿಸುವ ಶಕ್ತಿ ಹೊಂದಿದ್ದಾರೆ. ಈ ಮಾದರಿಯಲ್ಲಿ ಅವರ ಹೆಸರಿನಲ್ಲಿ ಒಟ್ಟು 2673 ರನ್’ಗಳು ದಾಖಲಾಗಿವೆ. ಅವರ ಉತ್ತಮ ಸ್ಕೋರ್ 95 ರನ್.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Amol Kaleಅಧಿಕಾರ ಸ್ವೀಕರಿಸುತ್ತಲೇ ಚೀನಾ, ಪಾಕಿಸ್ತಾನಕ್ಕೆ ಶಾಕ್ ನೀಡಿದ ವಿದೇಶಾಂಗ ಸಚಿವ ಜೈಶಂಕರ್ದೊಡ್ಮನೆ ‘ಯುವ’ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನದ ಬಗ್ಗೆ ಮೌನ ಮುರಿದ ಶ್ರೀದೇವಿ ಹೇಳಿದ್ದು ಹೀಗೆ
ಶಿವಂ ದುಬೆ ವೃತ್ತಿಜೀವನ ಶಿವಂ ದುಬೆ ಟಿ20 ವಿಶ್ವಕಪ್ 2024 ಶಿವಂ ದುಬೆ ಸುದ್ದಿ ಶಿವಂ ದುಬೆ ಕನ್ನಡದಲ್ಲಿ ಸುದ್ದಿ ಕನ್ನಡದಲ್ಲಿ ಶಿವಂ ದುಬೆ ಸುದ್ದಿ Shivam Dube Shivam Dube Career Shivam Dube T20 World Cup 2024 Shivam Dube News Shivam Dube News In Kannada Shivam Dube News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಟೀಂ ಇಂಡಿಯಾದಲ್ಲಿ ಸಾವಿರ ಪಟ್ಟು ರಾಜಕೀಯ ನಡೆಯುತ್ತದೆ ಎಂದಿದ್ದ ಕೆಎಲ್ ರಾಹುಲ್ ಅಮಾನತು ಸಾಧ್ಯತೆ!?ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಬಾರಿ ಐಪಿಎಲ್’ನಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಇದೀಗ ಇಂಥಾ ಸುದ್ದಿ ಹೊರಬಿದ್ದಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ.
और पढो »
ದಿನೇಶ್ ಕಾರ್ತಿಕ್ ಔಟ್ ನೀಡಿಲ್ಲವೆಂದು ಮೈದಾನದಲ್ಲೇ ಥರ್ಡ್ ಅಂಪೈರ್ ವಿರುದ್ಧ ಕಿಡಿಕಾರಿದ ಕುಮಾರ್ ಸಂಗಕ್ಕಾರ!ಥರ್ಡ್ ಅಂಪೈರ್ ವಿರುದ್ಧ ಪ್ರಶ್ನೆಗಳು ಎದ್ದಿರುವುದು ಇದೇ ಮೊದಲೇನಲ್ಲ. ಈ ಸೀಸನ್’ನಲ್ಲಿ ಇಂತಹ ದೃಶ್ಯಗಳು ಹಲವು ಬಾರಿ ಕಂಡುಬಂದಿವೆ.
और पढो »
T20 World Cup 2024 : ಈ ಇಬ್ಬರು ಸ್ಟಾರ್ ಆಟಗಾರರಿಗೆ ಇದೇ ಕೊನೆಯ ವಿಶ್ವಕಪ್!?Virat Kohli-Rohit Sharma: ಒಟ್ಟು 20 ತಂಡಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಎ ಗುಂಪಿನಲ್ಲಿವೆ. ಈ ಬಾರಿಯ ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ಟೀಂ ಇಂಡಿಯಾ ಅಮೆರಿಕ ಪ್ರವೇಶಿಸಿದೆ.
और पढो »
ಈ ಸೊಪ್ಪನ್ನು ಬರೀ ಮೂಸಿ ನೋಡುವುದರರಿಂದಲೇ ಶೀತ ಕೆಮ್ಮು ತಕ್ಷಣ ಪರಿಹಾರವಾಗುತ್ತದೆ ! ಕಫ, ತಲೆನೋವಿಗೂ ಇದೇ ಮದ್ದುMint leaves for cold and cough: ಶೀತ ಕೆಮ್ಮು ಕಾಣಿಸಿಕೊಂಡಾಗ ಕೆಲವು ಮನೆಮದ್ದುಗಳನ್ನು ಬಳಯಿ ಅದನ್ನು ಪರಿಹರಿಸಿಕೊಳ್ಳಬಹುದು. ಈ ಪೈಕಿ ಈ ಸೊಪ್ಪು ಕೂಡಾ ಉತ್ತಮ ಪರಿಹಾರ.
और पढो »
ಯಶಸ್ವಿ ಜೈಸ್ವಾಲ್’ಗಿಂತ ಟಿ20 ವಿಶ್ವಕಪ್’ನಲ್ಲಿ ಆರಂಭಿಕರಾಗಿ ಈ ಆಟಗಾರ ಕಣಕ್ಕಿಳಿಯಲಿ ಎಂದ ಇರ್ಫಾನ್ ಪಠಾಣ್ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ರವೀಂದ್ರ ಜಡೇಜಾ ಅವರಂತಹ ದೊಡ್ಡ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಇದೇ ಸಂದರ್ಭದಲ್ಲಿ ಮಾಜಿ ಆಲ್’ರೌಂಡರ್ ಇರ್ಫಾನ್ ಪಠಾಣ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
और पढो »
ಅಂಜಲಿ ಕೊಲೆಗೆ ಪೊಲೀಸರೇ ಕಾರಣ, ಪೊಲೀಸರನ್ನು ರಾಜಕೀಯ ವಿರೋಧಿಗಳ ಧಮನಕ್ಕೆ ಬಳಕೆ: ಬಸವರಾಜ ಬೊಮ್ಮಾಯಿಗದಗನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ನೇಹಾ ಹಾಗೂ ಅಂಜಲಿ ಹತ್ಯೆ ಪ್ರಕರಣ ಕುರಿತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಈ ಪ್ರಕರಣದಲ್ಲಿ ಸಂಪೂರ್ಣವಾಗಿ ಪೊಲೀಸರ ವೈಫಲ್ಯವಿದೆ.
और पढो »