ಕನ್ನಡ, ತಮಿಳು, ತೆಲುಗು ಚಿತ್ರರಂಗದ ಖ್ಯಾತ ನಟಿ ಮೀನಾ, ತಾಳೆ ತಮಿಳು ಮಾತ್ರವಲ್ಲದೆ, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಮುಂತಾದ ವಿವಿಧ ಭಾಷೆಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ನಟಿ ಹೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲವಾದರೂ ಜನಪ್ರಿಯ ಮಾಧ್ಯಮ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ 'ನಾನು ಚಿಕ್ಕವಳಿದ್ದಾಗ ಹೃತಿಕ್ ರೋಷನ್‌ನಂತಹ ಪತಿ ಬೇಕು ಎಂದು ಹೇಳುತ್ತಿದ್ದೆ' ಎಂದು ಹೇಳಿಕೊಂಡಿದ್ದಾರೆ.
ನಟಿ ಮೀನಾ ಕನ್ನಡ, ತಮಿಳು, ತೆಲುಗು ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರು. 1995 ರಲ್ಲಿ ಮೀನಾ ಪುಟ್ನಂಜ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಪರಿಚಯವಾದರು. ಮೊದಲ ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ಚೆಲುವೆ ಈಕೆ.. ಸಧ್ಯ ಮೀನಾ ಕುರಿತು ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..90ರ ದಶಕದಲ್ಲಿ ಟಾಪ್ ನಟಿಯರಲ್ಲಿ ಮೀನಾ ಕೂಡ ಒಬ್ಬರು, ಕನ್ನಡದಲ್ಲಿ ವಿಷ್ಣುವರ್ಧನ್, ರವಿಚಂದ್ರನ್ ಸೇರಿದಂತೆ ಹಲವಾರು ದಿಗ್ಗಜ ನಟ ಜೊತೆ ನಟಿಸಿದ್ದಾರೆ. ತಮಿಳಿ ಮತ್ತು ತೆಲುಗಿನಲ್ಲಿಯೂ ಸಾಕಷ್ಟು ಸಿನಿಮಾಗಳಲ್ಲಿ ಮೀನಾ ಕಾಣಿಸಿಕೊಂಡಿದ್ದಾರೆ..
ಸಧ್ಯ ಮೀನಾ ಬಾಲಿವುಡ್ ಸ್ಟಾರ್ ನಟನ ಕುರಿತು ನೀಡಿರುವ ಹೇಳಿಕೆಯೊಂದು ನೆಟ್ಟಿಗರ ಗಮನಸೆಳೆಯುತ್ತಿದೆ.. ಹೌದು.. ದಿಗ್ಗಜ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿರುವ ನಟಿ ಮೀನಾ ತಮಿಳು ಮಾತ್ರವಲ್ಲದೆ, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಮುಂತಾದ ವಿವಿಧ ಭಾಷೆಗಳಲ್ಲಿ ನಟಿಸಿದ್ದಾರೆ. ಹೆಸರಿಗೆ ತಕ್ಕಂತೆ ಇರುವ ಕಣ್ಣುಗಳು, ಮುದ್ದಾದ ನಗು, ಅಪರೂಪದ ಸೌಂದರ್ಯ, ಅದ್ಭುತ ನಟನೆ ಇಂದಿಗೂ ಜನಮಾನಸದಲ್ಲಿದೆ.. ಇತ್ತೀಚಿಗೆ ನಟಿ ಹೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲವಾದರೂ ಸಿಹಾಂದ್ರಿ ಸಿಂಹ, ಪುಟ್ನಂಜ, ಶ್ರೀಮಂಜುನಾಥ, ಸ್ವಾತಿ ಮುತ್ತು, ಮೈ ಆಟೋಗ್ರಾಫ್ ಸೇರಿದಂತೆ ಹಲವಾರು ಸಿನಿಮಾಗಳ ಇಂದಿಗೂ ಜನಪ್ರಿಯವಾಗಿದ್ದು, ಆಗಾಗ ಟಿವಿಯಲ್ಲಿ ಪ್ರಸಾರವಾಗುವ ಮೂಲಕ ಇಂದಿನ ಯುವಪಿಳೀಗೆಗೆ ಪರಿಚಿತರಾಗಿದ್ದಾರೆ ಮೀನಾ.. ಅಂದಹಾಗೆ ನಟಿ ಮೀನಾ 2009ರಲ್ಲಿ ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ವಿದ್ಯಾಸಾಗರ್ ಎಂಬುವರನ್ನು ವಿವಾಹವಾದರು. ಅವರಿಗೆ ನೈನಿಕಾ ಎಂಬ ಮಗಳಿದ್ದಾಳೆ. ನೈನಿಕಾ ಬಾಲಕಲಾವಿದೆಯಾಗಿ ನಟಿಸುತ್ತಿದ್ದಾಳೆ. ವಿಜಯ್ ಅಭಿನಯದ ʼತೇರಿʼ ಸಿನಿಮಾದ ಮೂಲಕ ನೈನಿಕಾ ಸಿನಿರಂಗಕ್ಕೆ ಕಾಲಿಟ್ಟರು. ಇನ್ನು ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಅವರು ಜೂನ್ 28, 2022 ರಂದು ನಿಧನರಾದರು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ಅದು ಹಾಗಿರಲಿ, ಇತ್ತೀಚಿಗೆ ಮೀನಾ ಪತಿ ಸಾವನ್ನಪ್ಪಿದ ದುಃಖದಿಂದ ಚೇತರಿಸಿಕೊಂಡಿದ್ದಾರೆ. ಇದರ ನಂತರ, ಅವರು ಕೆಲವು ಜಾಹೀರಾತುಗಳು ಮತ್ತು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನಪ್ರಿಯ ಮಾಧ್ಯಮ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ, 'ನಾನು ಚಿಕ್ಕವಳಿದ್ದಾಗ ಹೃತಿಕ್ ರೋಷನ್‌ನಂತಹ ಪತಿ ಬೇಕು ಎಂದು ಹೇಳುತ್ತಿದ್ದೆ' ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ತಮಗೆ ಹೃತಿಕ್ ರೋಷನ್ ಅಂದ್ರೆ ತುಂಬಾ ಇಷ್ಟ ಅಂತ ತಿಳಿಸಿದ್ದರು. ವಿಧಿಯಾಟದಿಂದ ಮೀನಾ ಅವರ ಮೊದಲ ಮದುವೆ ಅಂತ್ಯಗೊಂಡರೆ, ಪ್ರಸ್ತುತ ಅವರ ಎರಡನೇ ಮದುವೆಗೆ ಸಂಬಂಧಿಸಿದಂತೆ ಕೆಲವು ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ ಬಹುತೇಕ ಸುದ್ದಿಗಳು ಸುಳ್ಳಾಗಿದ್ದು, ನಂಬದಂತೆ ನಟಿ ಸ್ಪಷ್ಟತೆ ನೀಡಿದ್ದಾರೆ..
Minala Kannada Cinema Tamil Cinema Telugu Cinema Bollywood Hrtik Roshan Actress
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಆತ ನನ್ನ ಸ್ಕರ್ಟ್ ಒಳಗೆ ಕೈ ಹಾಕಿದ ಎಂದ ಖ್ಯಾತ ಗಾಯಕಿ..! ಅಷ್ಟಕ್ಕೂ ಆ ವ್ಯಕ್ತಿ ಯಾರು ಅಂತೀರಾ?ಈಗ ಇತ್ತೀಚಿಗೆ ಬಂಗಾಳಿ ಗಾಯಕಿ ತಮಗಾಗಿರುವ ಲೈಂಗಿಕ ದೌರ್ಜನ್ಯದ ಕುರಿತಾಗಿ ಮಾತನಾಡುತ್ತಾ ಹೃತಿಕ್ ರೋಷನ್ ಚಿಕ್ಕಪ್ಪ ರಾಜೇಶ್ ರೋಷನ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
और पढो »
ಲವ್ ಮ್ಯಾರೇಜ್ ಆಗುತ್ತಿರುವ ಬಿಗ್ ಬಾಸ್ ಧರ್ಮಕೀರ್ತಿ !ಚಾಕಲೇಟ್ ಬಾಯ್ ವರಿಸುವ ಹುಡುಗಿ ಇವರೇ !ಗೆಲುವು ಬೇಕು ಎನ್ನುವ ಕಾರಣಕ್ಕೆ ಎಲ್ಲೂ ತನ್ನ ಸ್ವಭಾವದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರಿಗೂ ಇಷ್ಟವಾಗಿದ್ದ ಕಂಟೆಸ್ಟೆಂಟ್ ಧರ್ಮ ಕೀರ್ತಿ.
और पढो »
ಗಂಡಸರ ಈ 5 ಅಭ್ಯಾಸಗಳು ಹೆಂಗಸರಿಗೆ ಸುತಾರಾಮ್ ಇಷ್ಟವಾಗಲ್ಲ.. ಬಾಯಿಬಿಟ್ಟು ಹೇಳದಿದ್ರೂ ಇದೇ ಸತ್ಯ!Relationship Tips: ಪತಿ-ಪತ್ನಿಯರ ನಡುವಿನ ಸಂಬಂಧವು ನಂಬಿಕೆ ಮತ್ತು ಪ್ರೀತಿಯ ಸೂಕ್ಷ್ಮ ದಾರದಿಂದ ಕಟ್ಟಲ್ಪಟ್ಟಿದೆ.
और पढो »
ಪೋರ್ನೋಗ್ರಫಿ ಪ್ರಕರಣ: ಶಿಲ್ಪಾ ಶೆಟ್ಟಿ ಮನೆ ಮೇಲೆ ಇಡಿ ದಾಳಿ..!ED Raids In Raj Kundra House: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ನಿರ್ಮಾಪಕ ರಾಜ್ ಕುಂದ್ರಾ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
और पढो »
ಹಾಲಿಡೇ ಮೂಡ್‌ನಲ್ಲಿ ವಿರಾಟ್-ಅನುಷ್ಕಾ..! ಫೋಟೋಸ್ ನೋಡಿ ಜಾಲಿ.. ಜಾಲಿ.. ಎಂದ RCB ಪ್ಯಾನ್ಸ್Virat kohli Anushka Sharma: ಅನುಷ್ಕಾ ಶರ್ಮಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹಾಗಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಪತಿ ವಿರಾಟ್ ಕೊಹ್ಲಿ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜೊತೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ.
और पढो »
ಸೋಶಿಯಲ್ ಮೀಡಿಯಾ ಅಕೌಂಟ್‌ನ್ನೇ ಡಿಲೀಟ್ ಮಾಡಿದ ನಯನತಾರಾ ಪತಿ... ವಿಕ್ಕಿ ನಡೆಗೆ ಧನುಷ್ ಅಭಿಮಾನಿಗಳೇ ಕಾರಣ..?ನಯನತಾರಾ ಜೊತೆಗೆ ಅವರ ಪತಿ ವಿಘ್ನೇಶ್ ಶಿವನ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಮೂರು ಸೆಕೆಂಡುಗಳ ವೀಡಿಯೊವನ್ನು ಬಳಸಿದ್ದಕ್ಕಾಗಿ ಒಟ್ಟು 10 ಕೋಟಿ ರೂಪಾಯಿಗಳನ್ನು ಪಾವತಿಸಲು ಧನುಷ್ ಬೇಡಿಕೆಯನ್ನು ತೀವ್ರವಾಗಿ ಟೀಕಿಸಿದ್ದರು
और पढो »