ಬಿಗ್ ಬಾಸ್ ಮನೆಯಿಂದ ಹೊರ ಬಂದ ಶಿಶಿರ್ ಶಾಸ್ತ್ರಿ, ಬಿಗ್ ಬಾಸ್ ನಲ್ಲಿ ಅನುಭವ, ಇತರ ಸ್ಪರ್ಧಿಗಳ ಸ್ವಭಾವ, ಸಂಭಾವನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಶಿಶಿರ್ ಶಾಸ್ತ್ರಿ ಸಂದರ್ಶನವೊಂದರಲ್ಲಿ ದೊಡ್ಮನೆಯಲ್ಲಿ ಆದ ಅನುಭವ, ಅಲ್ಲಿನ ಇತರ ಸ್ಪರ್ಧಿಗಳ ಸ್ವಭಾವ, ಬಿಗ್ ಬಾಸ್ ನೀಡಿರುವ ಸಂಭಾವನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕಾಲೇಜು ದಿನಗಳಿಂದಲೂ ನಾನು ಸುದೀಪ್ ಅವರ ಫ್ಯಾನ್. ನನ್ನ ಮೊದಲ ಸಿನಿಮಾದ ಆಡಿಯೋ ಲಾಂಚ್ ಅವರ ಕೈಯಲ್ಲೇ ಆಗಬೇಕು ಎಂದು ಹಠ ಹಿಡಿದಿದ್ದೆ. ನನ್ನ ಮೊದಲ ಸಿನಿಮಾದ ಕಟೌಟ್ ಕೂಡ ಸುದೀಪ್ ಅಣ್ಣನದ್ದೇ ಹಾಕಿಸಿದ್ದು. ನಾನು ಅಷ್ಟು ದೊಡ್ಡ ಹುಚ್ಚು ಅಭಿಮಾನಿ' ಎಂದು ಹೇಳಿದ್ದಾರೆ.
ಇನ್ನು ಶಿಶಿರ್ ಪ್ರಕಾರ ಯಾರು ಟಾಪ್ 5ಗೆ ಬರ್ತಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹನುಮಂತ, ತ್ರಿವಿಕ್ರಮ್, ರಜತ್, ಚೈತ್ರಾ, ಭವ್ಯಾ ಅಥವಾ ಮಂಜು' ಎಂದು ಹೇಳಿದ್ದಾರೆ.ಈ ನಂತರ ಸಂಭಾವನೆ ಎಷ್ಟು ಸಿಕ್ಕಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನು ಹೇಳೋಕೆ ಆಗಲ್ಲ, ಆದರೆ ಬಿಗ್ ಬಾಸ್ ತಂಡದವರು ತುಂಬಾ ಡೀಸೆಂಟ್ ಅಮೌಂಟ್ ಕೊಟ್ಟಿದ್ದಾರೆ. ಯಾವುದೇ ಮೋಸ ಆಗಿಲ್ಲ' ಎಂದು ಹೇಳಿದ್ದಾರೆ. ಇನ್ನು ಬಿಗ್ ಬಾಸ್ ಸಂಭಾವನೆಯ ಹೊರತಾಗಿ ಶಿಶಿರ್ ಒಂದಷ್ಟು ಕ್ಯಾಶ್ ಪ್ರೈಜ್‌ಗಳನ್ನು ಸಹ ಪಡೆದಿದ್ದಾರೆ. ಬಿಗ್ ಬಾಸ್‌ನ ಮೂರು ಪ್ರಾಯೋಜಕರ ಕಡೆಯಿಂದ ಒಟ್ಟು 2 ಲಕ್ಷ ರೂಪಾಯಿಗಳ ಕ್ಯಾಶ್ ಪ್ರೈಜ್ ಮತ್ತು ಗಿಫ್ಟ್ ವೋಚರ್ ಪಡೆದುಕೊಂಡಿದ್ದಾರೆ. ಕನ್ನಡ, ತೆಲುಗು ಧಾರಾವಾಹಿ ಸೇರಿದಂತೆ ಒಂದಷ್ಟು ಸಿನಿಮಾಗಳನ್ನು ಮಾಡಿರುವ ಶಿಶಿರ್ ಅವರ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ಪ್ರಶ್ನಿಸಿದಾಗ, ' ಪರ್ವಾಗಿಲ್ಲ. ಚೆನ್ನಾಗಿದ್ದೀನಿ. ತುಂಬಾ ಚೆನ್ನಾಗಿ ಅಂತಲೂ ಹೇಳೋಕೆ ಆಗಲ್ಲ' ಎಂದು ಉತ್ತರಿಸಿದ್ದಾರೆ
ಶಿಶಿರ್ ಶಾಸ್ತ್ರಿ ಬಿಗ್ ಬಾಸ್ ಸುದೀಪ್ ಟಾಪ್ 5 ಸಂಭಾವನೆ ಕ್ಯಾಶ್ ಪ್ರೈಜ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಗ್ ಬಾಸ್ ನಿಂದ ಹೊರ ಬಂದ ಶಿಶಿರ್ ಶಾಸ್ತ್ರಿ ಪಡೆದ ಸಂಭಾವನೆ ಎಷ್ಟು ಗೊತ್ತೇ?Shishir Shastry Remuneration: ಶಿಶಿರ್ ಶಾಸ್ತ್ರಿ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಔಟ್ ಆಗಿದ್ದಾರೆ ಎನ್ನಲಾಗುತ್ತಿದ್ದು, ಇವರು ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »
ಬಿಗ್‌ಬಾಸ್ ಡಬಲ್ ಎಲಿಮಿನೇಷನ್‌ನಲ್ಲಿ ಅನಿರೀಕ್ಷಿತ ಟ್ವಿಸ್ಟ್.. ಈ ವಾರ ಮನೆಯಿಂದ ಹೊರಹೋಗೋದು ಇವರೇ!Bigg Boss elimination: ಬಿಗ್ ಬಾಸ್ ತಮಿಳು ಸೀಸನ್ 8 ಶೋನಿಂದ ಈ ವಾರ ನಡೆದ ಡಬಲ್ ಎವಿಕ್ಷನ್‌ನಲ್ಲಿ ಎಲಿಮಿನೇಟ್ ಆದ ಇಬ್ಬರು ಸ್ಪರ್ಧಿಗಳ ಬಗ್ಗೆ ತಿಳಿದುಕೊಳ್ಳೋಣ..
और पढो »
ಬಿಗ್ ಬಾಸ್ ವಿನ್ನರ್ ಬಗ್ಗೆ ಹಿಂಟ್ ಸಿಕ್ಕೇ ಬಿಡ್ತು.. ಫಿನಾಲೆಗೆ ಈ ವ್ಯಕ್ತಿ ಬರೋದು ಫಿಕ್ಸ್? ಟಾಪ್ 5 ಕಂಟೆಸ್ಟಂಟ್ಸ್ ಇವರೇ..!ಬಿಗ್ ಬಾಸ್ ವಿನ್ನರ್ ಬಗ್ಗೆ ಹಿಂಟ್ ಸಿಕ್ಕಿದ್ದು, ಫಿನಾಲೆಗೆ ಈ 5 ಜನರು ಬರೋದು ಫಿಕ್ಸ್ ಎನ್ನಲಾಗ್ತಿದೆ.
और पढो »
ಬಿಗ್ ಬಾಸ್ ನಲ್ಲಿ ಅಚ್ಚರಿಯ ಎಲಿಮಿನೇಷನ್.. ತಾಳ್ಮೆಯಿಂದಲೇ ಹೃದಯ ಗೆದ್ದಿದ್ದ ಈ ಸ್ಪರ್ಧಿಯೇ ಔಟ್, ಅತಿಯಾದ ಮೌನವೇ ಮುಳುವಾಯ್ತಾ !Dharma Keerthiraj Get Evicted From BBK 11: ಕನ್ನಡ ಬಿಗ್ ಬಾಸ್ ನಲ್ಲಿ ಅಚ್ಚರಿಯ ಎಲಿಮಿನೇಷನ್ ನಡೆದಿದೆ.
और पढो »
ಶಿಶಿರ್ ಶಾಸ್ತ್ರೀ ಬಿಗ್ ಬಾಸ್ ನಿಂದ ಹೊರ ಬಂದಿದ್ದಾರೆಶಿಶಿರ್ ಶಾಸ್ತ್ರೀ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.
और पढो »
ಇನ್ನುಮುಂದೆ ಬಿಗ್‌ಬಾಸ್ ಹೋಸ್ಟ್ ಮಾಡೋದು ʼಈʼ ಖ್ಯಾತ ನಟ! ಅಷ್ಟಕ್ಕೂ ಆತ ಬೇರಾರೂ ಅಲ್ಲ..Bigg Boss Host: ವಿಜಯ್ ಸೇತುಪತಿ ಬಿಗ್ ಬಾಸ್ ಸೀಸನ್ 8 ಅನ್ನು ಹೋಸ್ಟ್ ಮಾಡುತ್ತಿದ್ದರೆ, ಕಮಲ್ ಹಾಸನ್ ಕೂಡ ಬಿಗ್ ಬಾಸ್ ನಲ್ಲಿ ಪುನರಾಗಮನ ಮಾಡಲಿದ್ದಾರೆ ಎಂಬ ವರದಿಗಳಿವೆ.
और पढो »